ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ

ಹಾಸನ ಸೀಮೆ
ಇಂದಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎಲ್ಲಾ ರೀತಿಯ ಸೂಕ್ತ ಸೌಕರ್ಯಗಳನ್ನು ಸರ್ಕಾರ ನೀಡುತ್ತಿದೆ ಅದರೆ ಆ ಸೌಕರ್ಯಗಳು ಮಕ್ಕಳಿಗೆ ತಲುಪಿಸುವಂತಹ ಕೆಲಸವನ್ನು ಮಾಡಬೇಕು ಎಂದು ದ್ಯಾವನೂರು ಮಂಜುನಾಥ್ ರವರು ಹೇಳಿದರು.


ದ್ಯಾವನೂರು ಪ್ರತಿಷ್ಠಾನ ಹಾಗೂ ಜೆಡಿಎಸ್ ಯುವ ಮೋರ್ಚಾ ಸಂಯುಕ್ತಾಶ್ರಯದಲ್ಲಿ ದ್ಯಾವನೂರು ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್
ಹಾಗೂ ಲೇಖನ ಸಾಮಗ್ರಿಗಳನ್ನು ನೀಡಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಸೃಜನಶೀಲ ಕಲೆಗಳಿಗೆ ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ಶಿಕ್ಷಕರು ನೀಡಬೇಕು ಎಂದರು.

ಖಾಸಗಿ ಶಾಲೆಗಲ ಡೋನೆಷನ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದು ಕೇವಲ ಫೋಕಸ್ ಶಾಲೆಗಳಿಗೆ ಮಾರು ಹೋಗಿರುವ ಪೋಷಕರು ಮಕ್ಕಳ ಸೃಜನಶೀಲಕ್ಕೆ ತೊಂದರೆ ಆಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಪರೀಕ್ಷೇಗಳಿಂದ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ದೊರೆಯದ ಹಲವು ಮೂಲ ಸೌಕರ್ಯಗಳು ಇಂದಿನ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತಿದೆ ಎಂದು ಹೇಳಿದರು